ಮೈಸೂರು ಚಾಮರಾಜನಗರ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ ಶಾಸಕ ಅನಿಲ್ ಚಿಕ್ಕಮಾದು ಆಯ್ಕೆಯಾಗಿದ್ದಾರೆ. ಎರಡು ತಿಂಗಳ ಹಿಂದೆ ಎಂಸಿಡಿಸಿಸಿ ಬ್ಯಾಂಕಿನ ನಿರ್ದೇಶಕರ ಸ್ಥಾನಕ್ಕೆ ಎಚ್.ಡಿ. ಕೋಟೆ ತಾಲೂಕಿನ ನಿರ್ದೇಶಕರ ಸ್ಥಾನಕ್ಕೆ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಗುಂಡತ್ತೂರು ಪ್ರಕಾಶ್ ಸ್ಪರ್ಧಿಸಿಸಿದ್ದರು. ಚಲಾವಣೆಯಾದ 17 ಮತಗಳ ಪೈಕಿ ಇಬ್ಬರಿಗೂ 8 ಮತಗಳು ಬಂದು ಸಮಬಲ ಸಾದಿಸಿದ್ದರು. ಎಚ್.ಡಿ. ಕೋಟೆ ಕಸಬಾ ನಿರ್ದೇಶಕ ದಶರಥ ಅವರು ಚಲಾಯಿಸಿ ಮತದ ಕುರಿತು ಇಬ್ಬರೂ ಅಭ್ಯರ್ಥಿಗಳು ಕೋರ್ಟ್ ಮೊರೆ ಹೋಗಿದ್ದರು.