ಶಿರಸಿ :ಬೆಣ್ಣೆಹೊಳೆ ಫಾಲ್ಸ್ ನಲ್ಲಿ ಕಾಣೆಯಾಗಿದ್ದ ಅರಣ್ಯ ಮಹಾವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳಲ್ಲಿ ಶ್ರೀನಿವಾಸ ಎಂಬುವನನ್ನು ರಕ್ಷಣೆ ಮಾಡಲಾಗಿದ್ದು ಇನ್ನೊರ್ವ ರಾಹುಲ್ ಪತ್ತೆಗಾಗಿ ಶೋದಕಾರ್ಯ ನಡೆದಿದೆ. ಫಾಲ್ಸ್ ಗೆ ಹೋದ ನಾಲ್ವರಲ್ಲಿ ಇಬ್ಬರು ಕಾಲು ತೊಳೆಯಲು ಪಾಲ್ಸ್ ಮೇಲೆ ಹೋಗಿದ್ದರು.ಈ ಸಂದರ್ಭದಲ್ಲಿ ಶ್ರೀನಿವಾಸನ ಕಾಲು ಜಾರಿದ್ದ ರಿಂದ ಕೆಳಗೆ ಜಾರಿದ್ದಾನೆ.ಈತನನ್ನು ರಕ್ಷಿಸಲು ಹೋದ ರಾಹುಲ್ ಕೂಡಾ ಕಾಲು ಜಾರಿ ಕೆಳಗೆ ಬಿದ್ದು ಕಾಣೆಯಾಗಿದ್ದಾನೆಂದು ತಿಳಿದು ಬಂದಿದೆ..ಕಲ್ಲು ಹಿಡಿದುಕೊಂಡು ಪ್ರಾಣ ಉಳಿಸಿಕೊಂಡಿದ್ದ ಶ್ರೀನಿವಾಸನ್ನನ್ನು ಇನ್ನುಳಿದ ಇಬ್ಬರು ವಿದ್ಯಾರ್ಥಿಗಳು ಗ್ರಾಮಸ್ಥರ ಸಹಾಯದಿಂದ ಹಗ್ಗದಿಂದ ರಕ್ಷಣೆ ಮಾಡಿದ್ದಾರೆ.