ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಗುಡೂರ ಎಸ್.ಬಿ. ಗ್ರಾಮದಲ್ಲಿ ಭೂಮಿ ಕುಸಿದ ಘಟನೆ ಸೆ.೨೫ ಮುಂಜಾನೆ ೬ ಗಂಟೆಗೆ ನಡೆದಿದೆ. ಗ್ರಾಮದ ರಾಮಲಿಂಗೇಶ್ವರ ಗುಡಿ ಹತ್ತಿರದ ಮುನೆಯ ಮುಂದಿನ ರಸ್ತೆಯ ಭೂಮಿ ಕುಸಿದಿದೆ. ರಸ್ತೆಯ ಮುಂದೆ ಮನೆಗಳು ಇದ್ದು ಅದೃಷ್ಟವಶಾಂತ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಹಿಂದೆ ರೈತರು ತಮ್ಮ ದವಸ ಧಾನ್ಯಗಳನ್ನು ಭೂಮಿಯನ್ನು ಹೆಗೆದು ಶೇಖರಣೆ ಮಾಡುತ್ತಿದ್ದ ಜಾಗ ಇದಾಗಿತ್ತು ಎಂದು ಸ್ಥಳೀಯ ಗ್ರಾಮಸ್ಥರು ಹೇಳಿದರು. ಕುಸಿದ ರಸ್ತೆಯನ್ನು ಗ್ರಾಮ ಪಂಚಾಯತಿ ಅಧಿಕಾರಿಗಳು ಬೇಗನೆ ದುರಸ್ಥಿಗೊಳಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದರು.