ಗಣೇಶ ಚತುರ್ಥಿಯ ನಂತರದ ದಿನವಾದ ಭಾದ್ರಪದ ಮಾಸದ ಪಂಚಮಿಯ ದಿನದಂದು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಸಂಪ್ರದಾಯದಂತೆ, ಜೋಕುಮಾರಸ್ವಾಮಿಯನ್ನು ಪೂಜಿಸುವ ಪ್ರತೀತಿಯಿದ್ದು, ನಗರದ ಮನೆಮನೆಗಳಿಗೆ ಗುರುವಾರ ಗಂಗಾಮತಸ್ತರು ಬುಟ್ಟಿಯಲ್ಲಿ ಹೊತ್ತು ತರುವ ಪಾರ್ವತಿ ಪುತ್ರ ಜೋಕುಮಾರಸ್ವಾಮಿ ದೇವರನ್ನು ಮನೆಯ ಗೃಹಿಣಿಯರು ವಿವಿಧ ಹೂಗಳಿಂದ ಸಿಂಗರಿಸಿ, ಪೂಜಿಸಿ ಆಶೀರ್ವಾದ ಪಡೆದರು.ಪಾರ್ವತಿ ಪುತ್ರ ಜೋಕುಮಾರಸ್ವಾಮಿಯನ್ನು ಆರಾಧಿಸಿದರೆ ಊರಿನಲ್ಲಿ ಮಳೆ-ಬೆಳೆ ಸಮೃದ್ಧವಾಗಿ, ಜನರು ಸುಭಿಕ್ಷವಾಗಿರುವರೆಂಬ ನಂಬಿಕೆ ಹಿಂದಿನಿಂದಲೂ ಜನರಲ್ಲಿ ಇದ್ದು, ಅದಕ್ಕಾಗಿ ಊರಿನಲ್ಲಿ ಈ ಜೋಕುಮಾರಸ್ವಾಮಿಯ ಆರಾಧಿಸುತ್ತಾರೆ.