ಮಗು ಸತ್ತಿದೆ ಎಂದು ಆಸ್ಪತ್ರೆಯಿಂದ ಮನೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಮತ್ತೆ ಕಣ್ಣುಬಿಟ್ಟು ಜೋರಾಗಿ ಮಗು ಅಳುತ್ತಾ ಕುಳಿತ ಪವಾಡ ಸದೃಶ ಘಟನೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಮೂರು ದಿನ ಚಿಕಿತ್ಸೆ ಪಡೆದ ಬಳಿಕವೂ ಮಗು ಆರೋಗ್ಯದಲ್ಲಿ ಚೇತರಿಕೆ ಕಂಡಿರಲಿಲ್ಲ. ಆಕ್ಸಿಜನ್ ತೆಗೆದರೆ ಮಗು ಸಾಯುತ್ತದೆ ಎಂದು ಹೇಳಿದ್ದ ಆಸ್ಪತ್ರೆಯ ವೈದ್ಯರ ಮಾತಿನಿಂದ ತೀವ್ರ ಆತಂಕಕ್ಕೆ ಒಳಗಾಗಿ ಮಗು ಬದುಕುವುದಿಲ್ಲ ಎಂದು ಮನೆಗೆ ತೆಗೆದುಕೊಂಡು ಹೋಗುವಾಗ ಮಗು ಇದ್ದಕ್ಕಿದ್ದಂತೆ ಉಸಿರು ನಿಲ್ಲಿಸಿತ್ತು. ಇನ್ನೇನು ಮಗು ಸತ್ತು ಹೋಗಿದೆ ಎಂದು ಭಾವಿಸಿದ್ದ ಪೋಷಕರು ಮನೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಇದ್ದಕ್ಕಿದ್ದಂತೆ ಉಸಿರಾಡಿ ಅಳಲು ಆರಂಭಿಸಿದೆ. ಇದರಿಂದ ಎಚ್ಚೆತ್ತ ವೈದ್ಯರು ಕೂಡಲೇ ಆಂಬುಲ