ಸೊರಬ ಪಟ್ಟಣದ ಪುರದೈವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ ಆವರಣ ಮತ್ತು ಕಳಸ ಗೋಪುರದ ಸ್ವಚ್ಛತಾ ಕಾರ್ಯವನ್ನು ಯುವಾ ಬ್ರಿಗೇಡ್ ವತಿಯಿಂದ ಭಾನುವಾರ ಮಧ್ಯಾಹ್ನ 3 ಗಂಟೆಗೆ ನಡೆಸಲಾಯಿತು. ದೇವಸ್ಥಾನದ ಆವರಣ ಮತ್ತು ಹಾಸುಗಲ್ಲುಗಳ ಮೇಲೆ ಹುಲ್ಲು ಮತ್ತು ಪಾಚಿ ಬೆಳೆದಿತ್ತು ಮತ್ತು ಕಳಸ ಗೋಪುರದ ಮೇಲೆಯು ಗಿಡಗಳು ಬೆಳೆದಿದ್ದವು. ಗಮನಿಸಿದ ಯುವಾ ಬ್ರಿಗೇಡ್ ಕಾರ್ಯಕರ್ತರು ಸ್ವಚ್ಚತಾ ಕಾರ್ಯ ನಡೆಸುವ ಜೊತೆಗೆ ಮಳೆ ಬಂದರೆ ಕಳಸ ಗೋಪುರದಿಂದ ದೇವಸ್ಥಾನ ಒಳಗಡೆ ನೀರು ಸೋರುತ್ತಿತ್ತು. ಇದಕ್ಕೆ ಟಾರ್ಪಲ್ ಹೊದಿಕೆ ಹೊದಿಸಿದರು. ಯುವಾ ಬ್ರಿಗೇಡ್ ಜಿಲ್ಲಾ ಸಂಚಾಲಕ ಮಹೇಶ್ ಖಾರ್ವಿ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿನ ಹಲವು ದೇವಸ್ಥಾನಗಳನ್ನು ಸ್ವಚ್ಚಗೊಳಿಸಲಾಗಿದೆ ಎಂದರು