ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಬೆಂ.ಗ್ರಾ ಸಂಸದ ಡಾ. ಸಿ.ಎನ್. ಮಂಜುನಾಥ್, "ಲಕ್ಷಾಂತರ ಭಕ್ತರ ನಂಬಿಕೆಗೆ ಧಕ್ಕೆ ತಂದು ದೇವರಿಗೂ ದ್ರೋಹ ಮಾಡಿದ್ದಾರೆ" ಎಂದು ಖಂಡಿಸಿದ್ದಾರೆ. ಅವರು ತುಮಕೂರು ನಗರದಲ್ಲಿ ಶನಿವಾರ ಸಂಜೆ 4 ಗಂಟೆಯಲ್ಲಿ ಮಾತನಾಡುತ್ತಾ, "ಕೆಲವರು ಪವಿತ್ರ ಕ್ಷೇತ್ರವನ್ನು ಅಪಮಾನಗೊಳಿಸುವ ಪ್ರಯತ್ನ ನಡೆಸಿದ್ದಾರೆ. ತನಿಖೆ ನಡೆಯುತ್ತಿದೆ, ಸೂತ್ರಧಾರಿಗಳು ಯಾರು ಎಂಬುದು ಹೊರಬೀಳಲಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು" ಎಂದು ಒತ್ತಾಯಿಸಿದರು.