Download Now Banner

This browser does not support the video element.

ಹಾಸನ: ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ 3 ಜನ ನಿರ್ದೇಶಕರನ್ನು ಅಮಾನತು ಮಾಡಿ ಸಮಿತಿ ಅಧ್ಯಕ್ಷ ಆ‌ರ್.ಟಿ.ದ್ಯಾವೇಗೌಡ ಆದೇಶ

Hassan, Hassan | Sep 7, 2025
ಹಾಸನ: ನಗರದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ೩ ನಿರ್ದೇಶಕರನ್ನು ಅಮಾನತು ಮಾಡಿ ಸಮಿತಿ ಅಧ್ಯಕ್ಷ ಆ‌ರ್.ಟಿ.ದ್ಯಾವೇಗೌಡ ಆದೇಶಿಸಿದ್ದಾರೆ.ನಿರ್ದೇಶಕರಾದ ಡಾ. ಅರವಿಂದ್, ಎಸ್‌.ಜಿ. ಶ್ರೀಧರ್ ಹಾಗೂ ಜಿ.ಆರ್.ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿದೆ. ಸಂಸ್ಥೆಯ ನಿಯಮದ ಪ್ರಕಾರ ಸಂಸ್ಥೆಯ ನಿರ್ದೇಶಕರುಗಳು ಯಾರೂ ಸಂಸ್ಥೆಗೆ ಸೇರಿದ ಕಟ್ಟಡದ ಬಾಡಿಗೆದರರು ಹಾಗೂ ಫಲಾನುಭವಿಗಳಾಗಿರಬಾದೆಂಬ ಸ್ಪಷ್ಟ ನಿಯಮವಿದೆ. ಈ ನಿಯಮ ಉಲ್ಲಂಘನೆಯಾಗುತ್ತಿದೆ ಎಂದು ಸಂಘದ ಸದಸ್ಯರು ದೂರು ನೀಡಿದ ಹಿನ್ನಲೆ ಪರಿಶೀಲನೆ ನಡೆಸಿದ ವೇಳೆ ಆರೋಪ ಸಾಬೀತಾಗಿದೆ ಎಂದು ಹೇಳಲಾಗಿದೆ
Read More News
T & CPrivacy PolicyContact Us