ಸರ್ಕಾರ ಬಿತ್ತನೆ ಶೇಂಗಾ ಬೀಜದ ದರ ಕಡಿಮೆ ಮಾಡಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಆಶೋಕ್ ಹೇಳಿದರು.ನಗರದ ಕೃಷಿ ಸಹಾಯಕ ನಿರ್ದೇಶಕ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೃಷಿ ಇಲಾಖೆಯಿಂದ ವಿತರಣೆ ಮಾಡುವ ಬಿತ್ತನೆ ಶೇಂಗಾ ಬೀಜದ ದರ ದುಬಾರಿಯಾಗಿದೆ ಎಂದು ರೈತರು ಪ್ರತಿಭಟನೆ ಮಾಡಿದ ಹಿನ್ನಲೆ ಶಾಸಕರು ಕೃಷಿ ಸಚಿವರಿಗೆ ಹಾಗು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಬೆಲೆ ಕಡಿಮೆ ಮಾಡುವಂತೆ ಪತ್ರ ಬರೆದಿದ್ದರು. ಆದ್ದರಿಂದ ಬಿತ್ತನೆ ಶೇಂಗಾ ಬೀಜದ ದರ ಸರ್ಕಾರ ಕಡಿಮೆ ಮಾಡಿದೆ ಎಂದರು.