ಹುಬ್ಬಳ್ಳಿಯಲ್ಲಿ ಬಾರ ಮುಂದೆ ಕುಡಿದು ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಲು ಹೋದ ಬಾರ್ ಸಿಬ್ಬಂದಿ ಹಾಗೂ ವ್ಯಕ್ತಿಯ ನಡುವೆ ಜಗಳವಾಗಿ ಬಾರ್ ಸಿಬ್ಬಂದಿಗೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.ಹುಬ್ಬಳ್ಳಿ ರೈಲ್ವೆ ಸ್ಟೇಷನ್ ಹತ್ತಿರ ಇಂದು ಮಧ್ಯಾಹ್ನ ಕುಡಿದು ಬಾರ ಮುಂದೆ ಮಲಗಿದ್ದ ವ್ಯಕ್ತಿಯನ್ನು ಬಾರ ಸಿಬ್ಬಂದಿ ಎಬ್ಬಿಸಲು ಹೋದ ವೇಳೆ ಚಾಕು ಇರಿತವಾಗಿದ್ದು ಘಟನೆಯಲ್ಲಿ ಬಾರ್ ಸಿಬ್ಬಂದಿ ಓರ್ವ ಯುವಕನಿಗೆ ಚಾಕು ಇರಿತವಾಗಿದ್ದು. ಹಾಗೂ ಚಾಕು ಇರಿದ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳು ಆಗಿದ್ದು. ಚಾಕು ಇರಿತಕ್ಕೆ ಒಳಗಾಗಿದ್ದ ಯುವಕನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.