Download Now Banner

This browser does not support the video element.

ಭದ್ರಾವತಿ: ಭದ್ರಾವತಿ ಡಿವೈಎಸ್‌ಪಿ ಸೇರಿ ಹಲವು ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ

Bhadravati, Shimoga | Oct 6, 2025
ಭದ್ರಾವತಿ ಉಪ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಡಿವೈಎಸ್‌ಪಿ ನಾಗರಾಜ್‌ ಕೆ.ಆರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ. ಚಿಕ್ಕಮಗಳೂರು ಉಪ ವಿಭಾಗಕ್ಕೆ ಅವರನ್ನು ವರ್ಗಾಯಿಸಿ ಸರ್ಕಾರ ಸೋಮವಾರ ಸಂಜೆ 5 ಗಂಟೆಗೆ ಆದೇಶ ಹೊರಡಿಸಿದೆ. ಆಂತರಿಕ ಭದ್ರತಾ ವಿಭಾಗದಿಂದ ಚಿದಾನಂದ್ ಸಿಪಿಐ ಅವರನ್ನು ಭದ್ರಾವತಿ ಗ್ರಾಮಾಂತರ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿದೆ‌ ಭದ್ರಾವತಿ ಗ್ರಾಮಾಂತರ ಠಾಣೆಯ ಸಿಪಿಐ ಜಗದೀಶ್‌ ಸಿ.ಹಂಚಿನಾಳ ಅವರನ್ನ ಶಿವಮೊಗ್ಗ ಜಿಲ್ಲೆಯ ಡಿ.ಎಸ್‌.ಬಿ.ಗೆ ವರ್ಗಾವಣೆ ಮಾಡಲಾಗಿದೆ.
Read More News
T & CPrivacy PolicyContact Us