21 ಕ್ಯಾರೆಟ್ ಚಿನ್ನವನ್ನ 24 ಕ್ಯಾರೆಟ್‌ಗೆ ಬದಲಿಸಿ ಕೊಡುವುದಾಗಿ ವಂಚಿಸಿದ್ದ ಆರೋಪಿಯನ್ನ ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ಮೋಹಲ್ ಲಾಲ್ ಬಂಧಿತ ಆರೋಪಿಯಾಗಿದ್ದು, ಆತನಿಂದ 30 ಲಕ್ಷ ರೂ ಮೌಲ್ಯದ 305 ಗ್ರಾಂ ಚಿನ್ನದ ಗಟ್ಟಿ, ಚಿನ್ನ ಕರಗಿಸುವ ಯಂತ್ರವನ್ನ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಕುರಿತು ಸೆಪ್ಟೆಂಬರ್ 9ರಂದು ಬೆಳಿಗ್ಗೆ 11:30ಕ್ಕೆ ಮಾಹಿತಿ ನೀಡಿದ ಪೊಲೀಸರು,'ನಗರತ್ ಪೇಟೆಯ ಕೃಷ್ಣ ಜ್ಯುವೆಲ್ಲರ್ಸ್ ಹೆಸರಿನ ಚಿನ್ನದಂಗಡಿ ಮಾಲೀಕರಿಗೆ ಪರಿಚಯವಾಗಿದ್ದ ಆರೋಪಿ, ಚಿನ್ನವನ್ನ ಮಾರ್ಪಡಿಸುವುದಾಗಿ ಪಡೆದು ವಾಪಾಸ್ ನೀಡದೆ ವಂಚಿಸಿದ್ದ. ಇದೇ ಮಾದರಿಯಲ್ಲಿ ಈ ಹಿಂದೆ ಎಸ್.ಆರ್ ನಗರ ಹಾಗೂ ಎಸ್.ಜೆ ಪಾರ್ಕ್ ಠಾಣೆ ಪೊಲೀಸರಿಂದಲೂ ಬಂಧನವಾಗಿದ್ದ ಆರೋಪಿ ಜಾಮೀನು ಪಡೆದಿದ್ದ' ಎಂದರು.