ಚಿತ್ರದುರ್ಗ(Power cut) 220 ಕೆವಿ. ಸ್ವೀಕರಣಾ ಕೇಂದ್ರದಿಂದ ಸರಬರಾಜಾಗುವ ಎಫ್-01 ಕಾಪರ್ ಮೈನ್ಸ್ 11 ಕೆ.ವಿ. ಮಾರ್ಗ, ಐ.ಪಿ. ಸೆಟ್ ಮಾರ್ಗ ಹಾಗೂ ನಿರಂತರ ಜ್ಯೋತಿ ಮಾರ್ಗಗಳು, ಕುಂಚಿಗನಾಲು, ಇಂಗಳದಾಳ್, ಕುರುಮರಡಿಕೆರೆ, ಕೆನ್ನೆಹಡಲು, ದೊಡ್ಡಸಿದ್ದವ್ವನಹಳ್ಳಿ, ಕ್ಯಾದಿಗೆರೆ ಮತ್ತು ಕಸವನ್ನಹಳ್ಳಿ ಮತ್ತು ಸುತ್ತಮುತ್ತಲು ಪ್ರದೇಶದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಆಗಸ್ಟ್ 23, 24 ರಂದು ಬೆಳಿಗ್ಗೆ 10 ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ.ಚಿತ್ರದುರ್ಗ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಎಲ್ಲಾ ಗ್ರಾಹಕರು ಹಾಗೂ ಸಾರ್ವಜನಿಕರು ವಿದ್ಯುತ್ ಸಹಕರಿಸಬೇಕಾಗಿ ಶುಕ್ರವಾರ ಬೆಸ್ಕಾಂ ಇಲಾಖೆ ಪ್ರಕಟಣೆ ತಿಳಿಸಿದೆ.