ಕಲಬುರಗಿಯ ಬಸವನಗರದಲ್ಲಿ ಶನಿವಾರ ಸಂಜೆ 5 ಗಂಟೆ ಸುಮಾರಿಗೆ ನಾಗರೀಕರಿಗೆ ಅಂಜಿಕೆ ಹುಟ್ಟಿಸುವ ಘಟನೆಯೊಂದು ನಡೆದಿದೆ. ಅಚಾನಕ್ ಭಾರೀ ಕರ್ಕಸ್ ಸದ್ದು ಕೇಳಿ ಗೋಡೆಗಳು ಕಂಪಿದಂತ ಅನುಭವ ಕಂಡು ನಾಗರೀಕರು ಬೆಚ್ಚಿಬಿದ್ದಾರೆ.. ಮನೆಗಳಲ್ಲಿ ಮಂಚದ ಮೇಲಿದ್ದವರು ಕೂಡ ತೂಗಿದ ಅನುಭವ ಆಗಿದೆ ಎಂದು ಅನುಭವ ಹಂಚಿಕೊಂಡಿದ್ದಾರೆ. ಯಾರಾದ್ರೂ ಮೇಲಿಂದ ಬಿದ್ರಾ ಅಂತ ಭಾವಿಸಿ ಮನೆಯಿಂದ ಹೊರಗೆ ಓಡಿಬಂದೆವು ಎಂದು ಇನ್ನೊಬ್ಬ ಸ್ಥಳೀಯರು ಆತಂಕ ವ್ಯಕ್ತಪಡಿಸಿದರು. ಭೂಮಿ ಕಂಪಿದ ಅನುಭವ ತೀವ್ರವಾಗಿದ್ದ ಕಾರಣ ಕೆಲವರು ಇದು ಸಣ್ಣ ಮಟ್ಟದ ಭೂಕಂಪವೇನೋ ಎಂಬ ಶಂಕೆಯಲ್ಲಿದ್ದಾರೆ. ಆದರೆ ನಿಜವಾದ ಕಾರಣ ಇನ್ನೂ ತಿಳಿದು ಬಂದಿಲ್ಲ.ನಾಗರಿಕರು ಭಯಭೀತರಾಗಿದ್ದು, ಈ ಅಕಸ್ಮಾತ್ ಸದ್ದಿನ ಮೂಲ ಪತ್ತೆಹಚ್ಚಲು ಅಧಿಕಾರಿಗಳು ತಕ್ಷಣ ಕ್ರಮ ಕೈ