ಕೊಡಗು ಜಿಲ್ಲೆಯಾಧ್ಯಂತ ಗಣೇಶ ಚತುರ್ಥಿಯ ಸಂಭ್ರಮ ಕಳೆಗಟ್ಟಿದೆ. ಅದರಲ್ಲೂ ಮಡಿಕೇರಿ ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವಗಳು ಅದ್ಧೂರಿಯಾಗಿ ನಡೀತಿವೆ. ಅಷ್ಟೇ ಅಲ್ಲದೆ ನಗರದ ಗಣಪತಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಹೋಮ, ಹವನಗಳನ್ನು ಹಮ್ಮಿಕೊಳ್ಳಲಾಗಿದೆ. ಬೆಳಗ್ಗಿನಿಂದಲೇ ಭಕ್ತರು ದೇವಾಲಯಗಳತ್ತ ಮುಖಮಾಡಿ ವಿಘ್ನ ನಿವಾರಕನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಅದರಲ್ಲಿ ನಗರದ ಕೋಟೆ ಮಹಾಗಣಪತಿ ದೇವಸ್ಥಾನ ಕೂಡ ಒಂದು. ಕೊಡಗನ್ನು ಆಳಿದ ಹಾಲೇರಿ ವಂಶಧಳದ ರಾಜರು ನಿರ್ಮಿಸಿದ ಕೋಟೆ ಗಣಪತಿ ದೇಗುಲದಲ್ಲೂ ಇಂದು ವಿಶೇಷ ಪೂಜೆಗಳು ನೆರವೇರಿದವು. ಈ ದೇವಾಲಯದ ವಿಶೇಷ ಅಂದ್ರೆ ಕೊಡಗಿನ ಬಹುದೊಡ್ಡ ಸಮಸ್ಯೆಯಾದ ಕಾಡಾನೆ ಮಾನವ ಸಂಘರ್ಷಕ್ಕೆ ಸಿಗುವ ಪರಿಹಾರ. ರೈತರು ತಾವು ಬೆಳೆದ ಬೆಳೆಗಳನ್ನು ಕಾಡಾನೆಗಳು ತಿಂದು, ತುಳಿದು