ತುಮಕೂರಿನ ಹೊರವಲಯದ ಪ್ರಸಿದ್ಧ ದೇವರಾಯನದುರ್ಗದ ಯೋಗ ನರಸಿಂಹ ದೇವಾಲಯದಲ್ಲಿ ಅರ್ಚಕ ನಾಗಭೂಷಣಾಚಾರ್ಯರ ಮೇಲೆ ಹಲ್ಲೆಯ ಘಟನೆ ಬೆಳಕಿಗೆ ಬಂದಿದೆ. ಕುಂಕುಮ ಇಡುವ ವೇಳೆ ಅನುಚಿತ ವರ್ತನೆ ಆರೋಪಿಸಿ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಯುವಕರು ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ದೇವಾಲಯದ ಮೆಟ್ಟಿಲ ಬಳಿ ಅರ್ಚಕರಿಗೆ ಹಲ್ಲೆ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸ್ಥಳೀಯರಲ್ಲಿ ಚರ್ಚೆಗೆ ಗ್ರಾಸವಾಗಿದೆ....