ಹುಬ್ಬಳ್ಳಿ: ಫ್ಲೈ ಓವರ್ ಕಾಮಗಾರಿ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ, ಮತ್ತು ಚನ್ನಮ್ಮ ಸರ್ಕಲ್ ಬಂದ್ ಮಾಡಿದ್ದರು. ಈಗ ನಾಲ್ಕುವರೇ ತಿಂಗಳ ನಂತರ ಮತ್ತೇ ಹಳೇ ಬಸ್ ನಿಲ್ದಾಣ ಮತ್ತು ಚನ್ನಮ್ಮ ಸರ್ಕಲ್ ಒಂದು ಭಾಗದ ರಸ್ತೆಯನ್ನು ವಾಹನ ಸಂಚಾರಕ್ಕೆ ಆರಂಭ ಮಾಡಿದ್ದಾರೆ.ನಗರದ ಚನ್ನಮ್ಮ ವೃತ್ತದ ಫ್ಲೈ ಓವರ್ ಕಾಮಗಾರಿಯಿಂದ, ನಾಲ್ಕೂವರೆ ತಿಂಗಳಿನಿಂದ ಉಪನಗರ ಕೇಂದ್ರ ಹಳೇ ಬಸ್ ನಿಲ್ದಾಣ ಸ್ಥಗಿತವಾಗಿತ್ತು. ಜಿಲ್ಲಾಡಳಿತ ಕೂಡ ಸೆಪ್ಟೆಂಬರ್ 3 ರಿಂದ ಆರಂಭ ಮಾಡುತ್ತೇವೆ ಎಂದಿದ್ದರು. ನಿನ್ನೆಯಿಂದ ಬಸ್ ಸೇರಿದಂತೆ ಎಲ್ಲ ವಾಹನಗಳ ಸಂಚಾರ ಆರಂಭವಾಗಿದೆ. ಇನ್ಮುಂದೆ ಮೊದಲಿನಂತೆ ಹಳೇ ಬಸ್ ನಿಲ್ದಾಣಗಳಿಗೆ ಬಸ್‌ಗಳು ಬರುತ್ತವೆ. ಅಷ್ಟೇ ಅಲ್ದೆ ಚನ್ನಮ್ಮ ಸರ್ಕಲ್ ಮಾರ್ಗ ಕೂಡ ಆರಂಭ ಮಾಡಿದ್ದಾರೆ. ಇನ್ನೂ ಕಾಮಗಾರಿ ಬಾಕ