ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಂಸದ ಶ್ರೇಯಸ್ ಪಟೇಲ್ ಅವರು ಇಂದು ಹಾಸನ ಮಹಾನಗರ ಪಾಲಿಕೆಯ ಕುವೆಂಪು ಸಭಾಂಗಣದಲ್ಲಿ ಎಲ್ಲ ಪೌರ ಕಾರ್ಮಿಕರಿಗೆ ಬಾಗಿನ ನೀಡಿ ಗೌರವಿಸಿದರು.ನಂತರ ಮಾತನಾಡಿದ ಅವರು, ಗೌರಿಬಹಬ್ಬದ ಸಂದರ್ಭದಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಬಾಗಿನ ಕೊಡುವುದಕ್ಕೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಅದರದೇ ಆದ ಗೌರವ, ಮಹತ್ವ ಇದೆ ಎಂದರು. ಅದೇ ಕಾರಣಕ್ಕೆ ಎಲ್ಲ ಸಂದರ್ಭದಲ್ಲೂ ನಗರದ ಸ್ವಚ್ಚತೆಗೆ ಶ್ರಮಿಸುವ ಪೌರ ಕಾರ್ಮಿಕರಿಗೆ ಇಂದು ಬಾಗಿನ ನೀಡಿ ಗೌರವಿಸಲಾಗಿದೆ ಎಂದರು.