ಮಡಿಕೇರಿ: ದೇಶದಾದ್ಯಂತ ಭಾನುವಾರ ಖಗ್ರಸ ಚಂದ್ರ ಗ್ರಹಣದ ಹಿನ್ನಲೆ ಸಂಜೆಯಿಂದ ದೇವಾಲಯಗಳು ಬಂದ್ ಆಗಿತ್ತು. ಸೋಮವಾರ ಬೆಳಗ್ಗೆ ದೇವಾಲಯದ ಬಾಗಿಲು ತೆರೆದು ಅರ್ಚಕರು ದೇವಾಲಯಗಳನ್ನ ಶುಚಿಗೊಳಿಸಿ ಗ್ರಹಣ ಶಾಂತಿ ಪೂಜೆ ಸೇರಿದಂತೆ ದೇವಾಲಯದಲ್ಲಿ ವಿಶೇಷ ಪೂಜೆಗಳನ್ನ ಸಲ್ಲಿಸಿದ್ರು. ಮುಂಜಾನೆಯಿಂದಲೆ ಭಕ್ತಾದಿಗಳು ದೇವಾಲಯಕ್ಕೆ ಆಗಮಿಸಿ ಗ್ರಹಣ ಶಾಂತಿ ಪೂಜೆ ,ರುಧ್ರಾಭಿಶೇಕ , ಸಂಕಲ್ಪ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳಲ್ಲಿ ತೊಡಗಿದ್ದಾರೆ. ಐತಿಹಾಸಿಕ ಓಂಕಾರೇಶ್ವರ ದೇವಾಲಯಕ್ಕೂ ಬೆಳಗಿನಿಂದಲೆ ಭಕ್ತಾಧಿಗಳು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪ್ರತಿ ಸೋಮವಾರ ಓಂಕಾರೇಶ್ವರ ದೇವಾಲದಲ್ಲಿ ತುಸು ಭಕ್ತರ ಸಂಖ್ಯೆ ಹೆಚ್ಚಾಗೆ ಇರ್ತಾರೆ. ಆದ್ರೆ ಗ್ರಹಣದ ಮಾರನೆದಿನವಾದ ಇಂದು ಸಾರ್ವಜನಿಕರ ಜೋತೆ ಪ್ರವಾಸಿಗರು ಕೂಡ ಹೆಚ್ಚಾಗ