ಯಲ್ಲಾಪುರ : ಮರಬಿದ್ದು ಮೃತ ಪಟ್ಟ ವಿದ್ಯಾರ್ಥಿನಿ, ಕಲಿಯುತ್ತಿದ್ದ ಶಾಲೆಯ ಆವರಣದಲ್ಲಿ ಪಾರ್ಥಿವಶರೀರಕ್ಕೆ ಅಂತಿಮ ನಮನ ಸಲ್ಲಿಸಿದಕ್ಷೇತ್ರಶಿಕ್ಷಣಾಧಿಕಾರಿ,ಶಿಕ್ಷಕವೃಂದ ಯಲ್ಲಾಪುರ : ಪಟ್ಟಣದ ಹೋಲಿ ರೋಜರಿ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯಾದ ಸ್ವಾತಿ ಬಾಗು ಕರಾತ ಡೋಮಗೇರಿಯಲ್ಲಿ ಮರ ಬಿದ್ದು ಗಾಯಗೊಂಡು ಸಾವನ್ನಪ್ಪಿದ್ದಳು.ಅವಳು ಕಲಿಯುತ್ತಿದ್ದ ಶಾಲೆ ಬಳಿ ಅಂತಿಮ ನಮನವನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರೇಖಾ ನಾಯ್ಕ ಹಾಗೂ ಶಾಲೆಯ ಮುಖ್ಯೋಧ್ಯಾಪಕರಾದ ಫಾದರ್ ರೆಮಂಡ್ ಫರ್ನಾಂಡಿಸ್,ದೈಹಿಕ ದ ಶಿಕ್ಷಣಾಧಿಕಾರಿಗಳಾದ ಪ್ರಕಾಶ ತಾರೀಕೊಪ್ಪ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಂತೋಷ ಜಿಗಳೂರ ಹಾಗೂ ಶಿಕ್ಷಕ ವೃಂದದವರು ಸಲ್ಲಿಸಿದರು.