ಕುಡಿಯಲು ಹಣ ನೀಡದ ಯುವಕನ ಮೇಲೆ ಮೂವರು ಯುವಕರ ತಂಡ ಮದ್ಯಪಾನ ಸೇವನೆಗೆ ಹಣ ಕೊಡದ ಮತ್ತೊಬ್ಬ ಯುವಕನ ಮೇಲೆ ಹಲ್ಲೆ ಮಾಡಿ, ತಲೆ ಕೂದಲನ್ನ ಕತ್ತರಿಸಿ, ಬಸ್ಕಿ ಹೊಡೆಸಿ ಜೇಬಿನಲ್ಲಿದ್ದ ಸಾವಿರ ರೂ. ಕಸಿದು ವಿಷಯ ಯಾರಿಗಾದರೂ ಹೇಳಿದರೆ ಕೊಲೆ ಮಾಡುವ ಬೆದರಿಕೆ ಹಾಕಿದ ಘಟನೆ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಸ್ಜಿದ್ ಬ್ಲಾಕ್ ನ ಮೊಹಮದ್ ಸಾಕ್ಲೇನ್ ಹಣ ಕಳೆದುಕೊಂಡ ಯುವಕನಾಗಿದ್ದರೆ, ನವಾಜ್, ಅಬ್ರಾರ್ ಹಾಗೂ ಸೇಠು ಎಂಬ ಯುವಕರ ವಿರುದ್ದ ಪ್ರಕರಣ ದಾಖಲಾಗಿದೆ.