ತುಮಕೂರು ನಗರದ ಗುಬ್ಬಿ ಗೇಟ್ ಬಳಿ ನಿರ್ಮಾಣಗೊಂಡಿದ್ದ ಹಿಂದೂ ಮಹಾಗಣಪತಿಯ ಮಹಾದ್ವಾರವನ್ನು ಪಾಲಿಕೆ ಅಧಿಕಾರಿಗಳು ಮಂಗಳವಾರ ಏಕಾಏಕಿ ತೆರವುಗೊಳಿಸಿದ ಪರಿಣಾಮ ಮಂಗಳವಾರ ಸಂಜೆ 7 ಗಂಟೆಯಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ ಸೆಪ್ಟೆಂಬರ್ 13ರಂದು ನಡೆಯಲಿರುವ ಗಣೇಶ ವಿಸರ್ಜನಾ ಮೆರವಣಿಗೆಯ ಅಂಗವಾಗಿ ಜಿ. ಪರಮೇಶ್ವರರ ತಂದೆ ಎಚ್. ಎಂ. ಗಂಗಾಧರಯ್ಯ ಅವರ ಹೆಸರಿನಲ್ಲಿ ಕಮಾನು ನಿರ್ಮಿಸಲಾಗಿತ್ತು. ಆದರೆ ಕೇಸರಿ ಬಟ್ಟೆ ಮತ್ತು ಬಾವುಟಗಳನ್ನು ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದ್ದು, ಪಾಲಿಕೆ ಈ ಕ್ರಮ ಕೈಗೊಂಡಿದೆ. ಈ ಬಗ್ಗೆ ಹಿಂದೂ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಗುಬ್ಬಿ ಗೇಟ್ ಪ್ರದೇಶದಲ್ಲಿ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್