Download Now Banner

This browser does not support the video element.

ಸೊರಬ: ಕುಬಟೂರಿನಲ್ಲಿ ಎತ್ತರದ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಿದ ಸಚಿವ ಮಧುಬಂಗಾರಪ್ಪ

Sorab, Shimoga | Sep 1, 2025
ಶಿಕ್ಷಣ ಸಚಿವರ ಸ್ವಗ್ರಾಮ ಕುಬಟೂರಿನಲ್ಲಿ ಯುವಕ ಮಂಡಳಿಯವರು ಪ್ರತಿಷ್ಠಾಪಿಸಿರುವ 16 ಅಡಿ ಎತ್ತರದ ಗಣೇಶ ಮೂರ್ತಿಗೆ ಸಚಿವ ಮಧು ಬಂಗಾರಪ್ಪ ಸೋಮವಾರ ಮಧ್ಯಾಹ್ನ 3 ಗಂಟೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಗಣೇಶನನ್ನು ರಾಜಧಾನಿ ಬೆಂಗಳೂರಿನಿಂದ ಬರಮಾಡಿಕೊಳ್ಳಲಾಗಿದ್ದು, ಸೊರಬ ತಾಲೂಕಿನಲ್ಲಿಯೇ ಅತೀ ಎತ್ತರದ ಗಣೇಶ ಮೂರ್ತಿಯಾಗಿದ್ದು, ಗಣಪನ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ. ಸಾವಿರಾರು ರೂಪಾಯಿ ವೆಚ್ಚದಲ್ಲಿ ಆಕರ್ಷಕವಾಗಿ ನಿರ್ಮಿಸಿರುವ ಮಂಟಪದಲ್ಲಿ, ರಾಜಗಾಂಭೀರ್ಯದಿಂದ ಸಿಂಹಾಸನದ ಮೇಲೆ ಕೂತು, ವಿವಿಧ ಕಲಾಕೃತಿಗಳಿಂದ ಕಂಗೊಳಿಸುತ್ತಿದೆ.
Read More News
T & CPrivacy PolicyContact Us