ಸಾಗರ ನಗರಸಭೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಮನೆಯ ಮುಂಭಾಗದಲ್ಲಿ ಆಟ ಆಡುತ್ತಿದ್ದ ಮೂರು ವರ್ಷದ ಬಾಲಕನ ಮೇಲೆ ಬೀದಿ ನಾಯಿ ಏಕಾಏಕಿ ದಾಳಿ ನಡೆಸಿರುವ ಘಟನೆ ಸೋಮವಾರ ಸಂಜೆ 6:20 ಕ್ಕೆ ನಡೆದಿದೆ. ನಾಯಿ ದಾಳಿಯಿಂದ ಬಾಲಕನ ಕಣ್ಣು ಮುಖ ಸೇರಿದಂತೆ ಅನೇಕ ಭಾಗಗಳಲ್ಲಿ ಗಾಯವಾಗಿದೆ. ಜನ್ಮತ್ ನಗರದ ನಿವಾಸಿ ರಶೀದ್ ಎಂಬುವರ ಮೂರು ವರ್ಷದ ಪುತ್ರನಿಗೆ ಗಂಭೀರ ಗಾಯವಾಗಿದೆ. ಬಾಲಕನಿಗೆ ದಾಳಿ ನಡೆಸಿದ ನಂತರ ಮಹಿಳೆಯ ಮೇಲೆಯೂ ಬೀದಿನಾಯಿ ದಾಳಿ ಮಾಡಿದೆ. ನಗರಸಭೆಯ ಆಡಳಿತ ಹಾಗ ಸದಸ್ಯರು ಹಾಗೂ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.