ಗುರುವಾರ ಸಾಗರ ನಗರದಲ್ಲಿ ನಡೆಯಲಿರುವ ಈದ್ ಮಿಲಾದ್ ಮೆರವಣಿಗೆ ಹಿನ್ನಲೆಯಲ್ಲಿ ಎಸ್ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಸಾಗರ ನಗರದ ಪ್ರಮುಖ ಬೀದಿಗಳಲ್ಲಿ ಅರೆಸೇನಾ ಪಡೆ, ಸ್ಪೆಷಲ್ ಆಕ್ಷನ್ ಫೋರ್ಸ್ ಹಾಗೂ ಪೋಲೀಸ್ ಸಿಬ್ಬಂದಿಗಳು ಮಂಗಳವಾರ ಸಂಜೆ 6 ಗಂಟೆಗೆ ರೂಟ್ ಮಾರ್ಚ್ ನಡೆಸಿದರು. ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅರೆಸೇನಾ ಪಡೆ, ಸ್ಪೆಷಲ್ ಆಕ್ಷನ್ ಫೋರ್ಸ್ ಹಾಗೂ ಪೋಲೀಸ್ ಸಿಬ್ಬಂದಿ ಜಂಟಿಯಾಗಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಪಥಸಂಚಲನ ನಡೆಸಿದರು. ನೆಹರೂ ನಗರದ ಅರಳಿಕಟ್ಟೆ ಯಿಂದ ಪಥ ಸಂಚಲನ ಆರಂಭಿಸಿ, ಅಶೋಕ್ ರೋಡ್, ಮಾರ್ಕೆಟ್ ರೋಡ್, ಶಿವಪ್ಪ ನಾಯಕ ವೃತ್ತ , ಸಿಗಂದೂರು ರಸ್ತೆ ಮಾರ್ಗವಾಗಿ ಮಹಾ ಲಕ್ಷ್ಮಿ ರೈಸ್ ಮಿಲ್ ತನಕ ಸಂಚರಿಸಿತು.