ಮಧುಗಿರಿ ತಾಲೂಕಿನ ಮಿಡಿಗೇಶಿ ಗ್ರಾಮಪಂಚಾಯಿತಿ ಅಧ್ಯಕ್ಷರು ಸೇರಿದಂತೆ ಒಟ್ಟು 11 ಮಂದಿ ಸದಸ್ಯರು ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದನ್ನು ಖಂಡಿಸಿ ಸಾಮೂಹಿಕ ರಾಜಿನಾಮೆಯನ್ನು ಸೋಮವಾರ ಸಂಜೆ 4 ಗಂಟೆಯಲ್ಲಿ ಸಲ್ಲಿಸಿದ್ದಾರೆ. ಉಪವಿಭಾಗಾಧಿಕಾರಿಗಳ ಕಚೇರಿಗೆ ರಾಜಿನಾಮೆ ಪತ್ರ ನೀಡಿದ ಬಳಿಕ ಮಾಜಿ ಅಧ್ಯಕ್ಷ ಎಸ್.ಎನ್. ರಾಜು ಮಾತನಾಡಿ, “ರಾಜಣ್ಣನ ವಜಾ ಕಾಂಗ್ರೆಸ್‌ಗೆ ದೊಡ್ಡ ಅನ್ಯಾಯ. ಅವರು ಅಹಿಂದ ವರ್ಗದ ಶಕ್ತಿಶಾಲಿ ನಾಯಕರು. ಇಂತಹ ನಾಯಕರಿಗೆ ನ್ಯಾಯ ದೊರೆಯದಿದ್ದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ” ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಹಿರಿಯ ಸದಸ್ಯರಾದ ಸುರೇಶ್, ವಿಜಯಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು ರೂಪ.