ಜನಗಣತಿಗೆ ತೆರಳುತ್ತಿದ್ದ ವೇಳೆ ಟೈರ್ ಒಡೆದು ನಿಯಂತ್ರಣ ತಪ್ಪಿ ಬೈಕ್ ಮೇಲಿಂದ ಬಿದ್ದು ಶಿಕ್ಷಕಿ-ಪತಿ-ಮಗು ಗಾಯಗೊಂಡ ಘಟನೆ ಚಿತ್ತಾಪುರ ತಾಲ್ಲೂಕಿನ ಪೇಠಶಿರೂರ ಬಳಿ ನಡೆದಿದೆ. ಶಿಕ್ಷಕಿ ಮಹಾದೇವಿ ಹಾಗೂ ಅವರ ಪತಿ ರಾಣಪ್ಪ ರಕ್ತಗಾಯಗಳಾಗಿ ನರಳುತ್ತಿದ್ದ ವೇಳೆ, ಇದೆ ರಸ್ತೆಯಲ್ಲಿ ತೆರಳುತ್ತಿದ್ದ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ತಕ್ಷಣ ಮಾನವೀಯತೆ ಮೆರೆದು, ತಮ್ಮ ಸರ್ಕಾರಿ ವಾಹನದಲ್ಲಿಯೇ ಆಸ್ಪತ್ರೆಗೆ ಸಾಗಿಸುವ ವ್ಯವಸ್ಥೆ ಮಾಡಿದರು. ಜೊತೆಗೆ ತಮ್ಮ ಅಂಗರಕ್ಷಕರ ಸಹಾಯದಿಂದ ಗಾಯಾಳುಗಳನ್ನು ತ್ವರಿತವಾಗಿ ಕಲಬುರಗಿ ಆಸ್ಪತ್ರೆಗೆ ರವಾನಿಸಿ ಜೀವ ರಕ್ಷಣೆಗೆ ನೇರವಾದರು.