ಕುಂದಗೋಳ: ಇಲ್ಲಿನ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ನಡೆಸಯ ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ ಹೊಂದಾಣಿಕೆಯಾಗುತ್ತಿಲ್ಲ ಎಂದು ವಿಚ್ಚೇಯ ಕೋರಿ ಪ್ರಕರಣ ದಾಖಲಿಸಿದ್ದ ಮೂರು ಜೋಡಿಗಳು ಹಿರಿಯ ದಿವಾಣಿ ನ್ಯಾಯಾಧೀಶರಾದ ಅಬ್ದುಲ್ ಖಾದರ್ ಅವರ ಸಲಹೆಯ ಮೇರೆಗೆ ಮತ್ತೆ ಒಂದಾದವು. ನ್ಯಾಯಾಧೀಶರು ಸ್ವತಃ ದಂಪತಿಗಳಿಗೆ ಪರಸ್ಪರ ಮಾಲೆ ಹಾಕಿಸಿ ರಾಜೀ ಮಾಡಿಸಿದರು. ನ್ಯಾಯಾಧೀಶರ ಕಾರ್ಯಕ್ಕೆ ದಂಪತಿಗಳು ಹರ್ಷ ವ್ಯಕ್ತಪಡಿಸಿದರು.