ಹಾಸನ- ಹಾಸನ ಸಂಸದ ಶ್ರೇಯಸ್ ಪಟೇಲ್ ಗೆ ಸಂಕಷ್ಟ ಶುರುವಾಗಿದ್ದು ಚುನಾವಣಾ ವೇಳೆ ಆಸ್ತಿ ವಿವರ ಮುಚ್ಚಿಟ್ಟ ಆರೋಪದ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ವಿಚಾರಣೆ ಕೈಗೆತ್ತಿಕೊಂಡ ಬೆನ್ನಲ್ಲೇ ನಗರಸಭೆ ಬಳಿ ಇಂದು ಸಂಸದ ಶ್ರೇಯಸ್ ಪಟೇಲ್ ಗೆ ವಕೀಲರು ನೋಟೀಸ್ ನೀಡಲು ಮುಂದಾದಾಗ ಕ್ಯಾರೆ ಎನ್ನದೆ ತಿರಸ್ಕಾರ ಮಾಡಿ ಮುನ್ನಡೆದರು.ಮೊದಲು ಡಿಸಿ ಕಛೇರಿಯ ಕಟ್ಟಡದಲ್ಲಿರೊ ಕಛೇರಿಗೆ ನೊಟೀಸ್ ಜಾರಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ನೊಟೀಸ್ ಅಂಟಿಸಿದ ವಕೀಲರು ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಚುನಾವಣಾ ಏಜೆಂಟ್ ಕೂಡ ಆಗಿರೊ ವಕೀಲ ಪೂರ್ಣಚಂದ್ರ ತೇಜಸ್ವಿ ಅಕ್ಟೋಬರ್ 6ರಂದು ವಿಚಾರಣೆ ಗೆ ಹಾಜರಾಗಲು ಸೂಚಿಸಿರೊ ನೊಟೀಸ್ ನೀಡಲು ಮುಂದಾದರು