ಸೆ.೨೯ ಮಧ್ಯಾಹ್ನ ೩ ಗಂಟೆಗೆ ಸಂದರ್ಭ ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನಲ್ಲಿ ಕಳೆದ ೧೫ ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ ಬೆಳೆದ ಸೂರ್ಯಕಾಂತಿ, ಈರುಳ್ಳಿ, ತೊಗರಿ, ಹತ್ತಿ ಬೆಳಗಳು ಸಂಪೂರ್ಣ ನಲಕಚ್ಚಿವೆ. ಸಂಕ್ಲಾಪೂರ ಗ್ರಾಮದ ರೈತ ಲಕ್ಷö್ಮಣ ಬಾದವಾಡಗಿ ತನ್ನ ಎರಡು ಎಕರೆ ಜಮೀನನಲ್ಲಿ ಬೆಳೆದ ಹತ್ತಿ ಬೆಳೆ ಸಂಪೂರ್ಣ ನೀರಿನಲ್ಲಿ ನಿಂತು ಹಾಳಾಗಿ ಹೋಗಿದ್ದು, ಮಳೆರಾಯ ರೈತರನ್ನು ಮತ್ತೇ ಸಂಕಷ್ಟಕ್ಕೆ ದೂಗಿದ್ದಾನೆ. ಈ ಕುರಿತು ಹತ್ತಿ ಬೆಳೆದ ರೈತ ರಾಜ್ಯ ಸರಕಾರ ಹಾಗೂ ಕೃಷಿ ಅಧಿಕಾರಿಗಳಲ್ಲಿ ಮನವಿ ಮಾಡಿಕೊಟ್ಟಿದ್ದು ಹೀಗೆ.