ರಸ್ತೆ ಅಪಘಾತದಲ್ಲಿ ಬಾಲಕನೋರ್ವ ಟಿಪ್ಪರ್ ವಾಹನದ ಕೆಳಗೆ ಸಿಲುಕಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆಗಸ್ಟ್ 24ರಂದು ಮಧ್ಯಾಹ್ನ 12:30ರ ಸುಮಾರಿಗೆ ಯಲಹಂಕದ ಮಾರುತಿ ನಗರದಲ್ಲಿ ಅಪಘಾತ ಸಂಭವಿಸಿದ್ದು, ಸೈಕಲ್‌ನಲ್ಲಿ ಬರುತ್ತಿದ್ದ ಬಾಲಕ ಎದುರಿನಿಂದ ಬಂದ ಟಿಪ್ಪರ್ ವಾಹನದಡಿ ಸಿಲುಕಿಕೊಂಡಿದ್ದಾನೆ. ಅರ್ಧ ದೇಹ ಟಿಪ್ಪರ್ ಚಕ್ರದಡಿ ಸಿಲುಕಿ ಒದ್ದಾಡುತ್ತಿದ್ದ ಬಾಲಕನನ್ನ ಸಾರ್ವಜನಿಕರು ರಕ್ಷಿಸಲು ಯತ್ನಿಸುತ್ತಿರುವ ದೃಶ್ಯ ಸ್ಥಳೀಯರೊಬ್ಬರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಥಳಿಯರೇ ಆ್ಯಂಬುಲೆನ್ಸ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದು, ಬಾಲಕನನ್ನ ಆಸ್ಪತ್ರೆಗೆ ರವಾನಿಸಲಾಗಿದೆ.