ರಾಮನಗರ - ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕುರುಕ್ಷೇತ್ರ ಅಥವಾ ಧರ್ಮ ರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕ ಪ್ರದರ್ಶನ ಮಾಡಿದರು. ವರ್ಷಪೂರ್ತಿ ಖಾಕಿ ಸಮವಸ್ತ್ರ, ಕ್ರೈಂ, ಎಪ್ಐಆರ್, ಎನ್ ಸಿಆರ್, ಕೋರ್ಟ್ ಜೈಲು ಎಂದು ಒತ್ತಡದಲ್ಲಿರುತ್ತಿದ್ದ ಪೋಲಿಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇಂದು ರಿಲ್ಯಾಕ್ಸ್ ಮೂಡನಲ್ಲಿದ್ದರು. ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕಕ್ಕೆ ಬಣ್ಣ ಹಚ್ಚಿ, ಕಾನೂನು ಕಾಪಡುವುದಷ್ಟೇ ಅಲ್ಲ ಅಬಿನಯಕ್ಕೂ ಪೋಲಿಸರು ಸೈ ಎಂಬುದನ್ನು ಸಾಬೀತು ಪಡಿಸಿದರು. ಇನ್ನೂ ಪೋಲಿಸ್ ಸಿಬ್ಬಂದಿಗಳ ಕಲಾ ಪ್ರೇಮವನ್ನು ಕಂಡ ಎಎಸ್ಪಿ ರಾಮಚಂದ್ರ ವೇದಿಕೆಯಲ್