ಹಾಸನ: ಸಕಲೇಶಪುರ ಬಿಸ್ಲೆ ಹಾಗೂ ಸುಬ್ರಮಣ್ಯ ಸಂಪರ್ಕಿಸುವ ರಸ್ತೆ ಮಾರ್ಗ ಮಧ್ಯೆ ಅಡ್ಡ ಒಡೆಯ ಮುಂದೆ ಭಾರಿ ಭೂಕುಸಿತ ಉಂಟಾಗಿದ್ದು ರಸ್ತೆಯ ಮೇಲೆ ಭಾರಿ ಪ್ರಮಾಣದ ಮಣ್ಣು ಕುಸಿದು ಬಿದ್ದಿರುವ ಘಟನೆ ಬುದುವಾರ ಬೆಳಗಿನ ಜಾವ ನಡೆದಿದೆ. ಬಿದ್ದಿರುವ ಮಣ್ಣು ಸ್ವಲ್ಪ ಪ್ರಮಾಣದ ರಸ್ತೆಯನ್ನು ಆವರಿಸಿದ್ದು ವಾಹನಗಳ ಓಡಾಟ ಕಡಿಮೆ ಇದ್ದ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ ಜೊತೆಗೆ ವಾಹನಗಳ ಓಡಾಟಕ್ಕೂ ಯಾವುದೇ ಅಡಚಣೆ ಇಲ್ಲ. ತಕ್ಷಣ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಈ ವಿಚಾರ ತರಲಾಗಿದ್ದು ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಿ ಜೆಸಿಬಿಯೊಂದಿಗೆ ಮಣ್ಣು ತೊರವು ತೆರವು ಮಾಡುವ ಕಾರ್ಯದಲ್ಲಿ ನಿರತರಾಗಿದ್ದು ಸುಗಮ ಸಂಚಾರಕ್ಕೆ ಅಧಿಕಾರಿಗಳು ಶ್ರಮ ವಹಿಸಿದ್ದಾರೆ