ತುಮಕೂರು ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕರಾಗಿ ಕೊಡಗಿಹಳ್ಳಿ ಸಿದ್ದಲಿಂಗಪ್ಪ ಅವರು ಎರಡನೇ ಬಾರಿಗೆ ಆಯ್ಕೆಯಾಗಿದ್ದು, ತುರುವೇಕೆರೆ ಪಟ್ಟಣದಲ್ಲಿ ಭರ್ಜರಿ ವಿಜಯೋತ್ಸವ ಸೋಮವಾರ ಮಧ್ಯಾಹ್ನ 3 ಗಂಟೆಯಲ್ಲಿ ನಡೆಯಿತು. ಅಭಿಮಾನಿಗಳು ಪಾದಯಾತ್ರೆ ಮೂಲಕ, ಪಟಾಕಿ ಸಿಡಿಸಿ ಸಿಹಿ ಹಂಚಿಕೆಯಿಂದ ಸಂಭ್ರಮಿಸಿದರು. ಸಿದ್ದಲಿಂಗಪ್ಪ ಮಾತನಾಡಿ, ತಮ್ಮ ಗೆಲುವಿಗೆ ಕಾರಣರಾದ ಪಿಎಸಿಎಸ್ ನಿರ್ದೇಶಕರು, ಕಾರ್ಯಕರ್ತರು ಹಾಗೂ ಜನತೆಗೆ ಧನ್ಯವಾದ ಅರ್ಪಿಸಿದರು. ಕಳೆದ ಐದು ವರ್ಷಗಳಲ್ಲಿ ರೈತ ಪರವಾಗಿ ತೃಪ್ತಿಕರ ಸೇವೆ ಸಲ್ಲಿಸಿದ್ದೇನೆ, ಮುಂದೆಯೂ ಹೆಚ್ಚಿನ ಅನುದಾನವನ್ನು ತರಿಸಿ ರೈತರಿಗೆ ನ್ಯಾಯ ಒದಗಿಸಲು ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.