ಹಾವೇರಿ ನಗರದ ವಿವಿಧಡೆ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಈ ರೀತಿ ಪ್ರತಿಷ್ಠಾಪಿಸಿದ ಗಣೇಶನನ್ನ ಐದು ದಿನ ಒಂಭತ್ತು ದಿನ ೧೧ ದಿನ ಸೇರಿದಂತೆ ೧೩ ದಿನಗಳವರೆಗೂ ವಿಸರ್ಜನೆ ಮಾಡಲಾಗುತ್ತದೆ. ಹಾವೇರಿಯ ಸಿದ್ದದೇವಪುರ ಗಣೇಶನನ್ನ ವಿಭಿನ್ನವಾಗಿ ವಿಸರ್ಜನೆ ಮಾಡಲಾಗುತ್ತದೆ. ಯಾವುದೇ ಪಟಾಕಿ ಗುಲಾಲು ಡಿಜೆ ಅಬ್ಬರವಿಲ್ಲದೆ ಜಾನಪದ ಕಲಾತಂಡಗಳ ಪ್ರದರ್ಶನ ಮೂಲಕ ಗಣೇಶ ನಿಮಜ್ಜನ ಕಾರ್ಯ ನಡೆಯಿತು.