ಜಾನಪದ ಲೋಕದ ಜಾನಪದ ಕೋಗಿಲೆ ದಿ. ಸಿರಿಯಜ್ಜಿ ಇವರಿಗೆ ಸ್ಮಾರಕ ನಿರ್ಮಾಣ ಆಗಿಲ್ಲ ಎನ್ನುವ ಕೊರಗು ಇಂದು ನಿವಾರಣೆಯಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗು ಸ್ಮಾರಕ ನಿರ್ಮಾಣದ ರೂವಾರಿ ಬಿ.ಚಿಕ್ಕಪ್ಪಯ್ಯ ಹೇಳಿದರು. ತಾಲ್ಲೂಕಿನ ಯಲಗಟ್ಟೆ ಗೊಲ್ಲರಹಟ್ಟಿ ದಿ.ಸಿರಿಯಜ್ಜಿ ಜಮೀನಿನಲ್ಲಿ ಮೈಸೂರು ಶ್ರೀಲಕ್ಷ್ಮೀ ನರಸಿಂಹ ಚಾರಿಟಬಲ್ ಟ್ರಸ್ಟ್, ಬಿ.ವಿ.ರಾಜೇಶ್ವರಿ ಮತ್ತು ಚಿಕ್ಕಪ್ಪಯ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಹಾಗು ಸಾಂಸ್ಕೃತಿಕ ಸಮಿತಿಯಿಂದ ನಿರ್ಮಾಣ ಮಾಡಿರುವ ಜಾನಪದ ಕೋಗಿಲೆ ದಿ.ಸಿರಿಯಜ್ಜಿ ಸ್ಮಾರಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಿರಿಯಜ್ಜಿ ಸ್ಮಾರಕ ನಿರ್ಮಾಣಕ್ಕೆ ಸಹಕಾರನೀಡಿದ ಎಲ್ಲರಿಗೂ ಧನ್ಯವಾದಗಳು ಎಂದರು.