ಬಂಗಾರಪೇಟೆ ಜಿಲ್ಲಾ ಅಧಿಕಾರಿ ಕಚೇರಿಗಳಿಂದ ಕೋಮುಲ್ ಗೆ ನಿಯಮಗಳನ್ನು ಉಲ್ಲಂಘಿಸಿ ಜಮೀನು ಮಂಜೂರು ಮಾಡಲಾಗಿದೆ ಹಾಗೂ ಕಂದಾಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ರೈತರಿಗೆ ನೀಡಿದ್ದ ಜಾಗವನ್ನು ಕೋಮುಲ್ ವತಿಯಿಂದ ಸೋಲಾರ್ ಘಟಕ ಸ್ಥಾಪನೆಗೆ ಬಳಸುತ್ತಿರುವುದು ನಿಯಮಬಾಹಿರ ಎಂದು ಶಾಸಕ ಎಸ್‌ಎನ್ ನಾರಾಯಣಸ್ವಾಮಿ ಆರೋಪಿಸಿದ್ದಾರೆ. ಗುರುವಾರ ಮಧ್ಯಾಹ್ನ 12 ಗಂಟೆಯಲ್ಲಿ ತಾಲೂಕಿನ ದಾಸರ ಹೊಸಹಳ್ಳಿ ಸಮೀಪ ನೂತನವಾಗಿ ನಿರ್ಮಿಸಿರುವ ಜಿ. ಆರ್ ಬಾರ್ ಅಂಡ್ ರೆಸ್ಟೋರೆಂಟ್ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡರು ಸದನದಲ್ಲಿ ಈ ಬಗ್ಗೆ ಅಕ್ರಮ ನಡೆದಿದೆ ಎಂದು ತಿಳಿಸಿರುವುದಾಗಿ ಹೇಳಿದರು.