ಅಫಜಲಪುರ ತಾಲ್ಲೂಕಿನ ಬಿದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಲ್ಕು ಹಳ್ಳಿಗಳ ಗ್ರಾಮಸ್ಥರು ಗ್ರಾಪಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ರಸ್ತೆ-ನೀರು-ಶೌಚಾಲಯಕ್ಕಾಗಿ ಬೀದಿಗೆ ಬಂದು ಕಿಡಿಕಾರಿದ್ದಾರೆ. ಪಂಚಾಯತಿಯಿಂದ ಅಭಿವೃದ್ಧಿ ಕಾರ್ಯಗಳು ನಡೆಯಿತ್ತಿಲ್ಲ, ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಲಾಗ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚಾಯತಿ ಅಧ್ಯಕ್ಷರು, ಸದಸ್ಯರು ಹಾಗೂ ಪಿಡಿಒ ಅಧಿಕಾರಿ ಸೇರಿ ಸರ್ಕಾರದ ಹಣ ಲಪಟಾಯಿಸುತ್ತಿದ್ದಾರೆ. ಅಭಿವೃದ್ಧಿ ಮರೆತು ಸಾರ್ವಜನಿಕ ಹಣ ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿದರು. ಗ್ರಾಮಗಳಲ್ಲಿ ರಸ್ತೆ ಇಲ್ಲದೆ, ನೀರಿಲ್ಲದೆ, ಮಹಿಳೆಯರು ಶೌಚಾಲಯವಿಲ್ಲದೆ ನರಕಯಾತನೆ ಅನುಭವಿಸುತ್ತಿದ್ದೇವೆ. ರಸ್ತೆ ಬದಿ ಶೌಚಾಕ್ಕೆ ಕುಡುವದು ತೊಂದರೆ ಆಗ್ತಿದೆ. ಶೌಚಾಲ