ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಮೈಸೂರು ತಾಲ್ಲೂಕಿನ ಚಾಮುಂಡಿಬೆಟ್ಟದ ಗ್ರಾಮದಲ್ಲಿರುವ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ಅಮ್ಮನವರ ದರ್ಶನಾರ್ಥವಾಗಿ ಭಾರತದ ಘನತೆವೆತ್ತ ರಾಷ್ಟçಪತಿಯವರು ಸೆಪ್ಟೆಂಬರ್ 01 ರ ಸೋಮವಾರ ರಾತ್ರಿ 08 ಗಂಟೆಗೆ ಭೇಟಿ ನೀಡುವ ಕಾರ್ಯಕ್ರಮ ನಿಗಧಿಯಾಗಿರುವುದರಿಂದ ಸದರಿ ದಿನದಂದು ಸಾರ್ವಜನಿಕರಿಗೆ ಮಧ್ಯಾಹ್ನ 02 ಗಂಟೆಯಿoದ ರಾತ್ರಿ 8.30 ಗಂಟೆಯವರೆಗೆ ತಾವರೆಕಟ್ಟೆಯಿಂದ ಚಾಮುಂಡಿಬೆಟ್ಟಕ್ಕೆ ಪ್ರವೇಶವನ್ನು ನಿಷೇಧಿಸಿದೆ.