ದಸರಾವನ್ನು ಭಾನು ಮುಸ್ತಾಕ್ ಉದ್ಘಾಟಿಸುವುದು ಸರಿಯಲ್ಲ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು. ಸಾಗರ ನಗರದಲ್ಲಿ ಶನಿವಾರ ಸಂಜೆ 6 ಗಂಟೆಗೆ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಹಿಂದಿನಿಂದಲೂ ನಡೆದುಕೊಂಡ ಪದ್ದತಿ ಅನುಸರಿಸುವ ಬದಲು ಸರ್ಕಾರ ಏಕೆ ಇಂತಹ ವಿವಾದ ಸೃಷ್ಟಿ ಮಾಡಿದೆ, ಇದು ಸರಿಯಲ್ಲ. ಉಪ ಮುಖ್ಯಮಂತ್ರಿಗಳು ಚಾಮುಂಡಿ ಬೆಟ್ಟ ಹಿಂದೂಗಳಿಗೆ ಸೇರಿದ್ದು, ಎಲ್ಲಾ ಜಾತಿಧರ್ಮಿಯರು ಹೋಗಬಹುದು. ಆದರೆ ಬೆಟ್ಟ ಹಿಂದೂಗಳಿಗೆ ಸೇರಿದ್ದು ಎನ್ನುವುದು ಖಚಿತ. ಯರ‍್ಯಾರು ಯಾವ್ಯಾವ ಧರ್ಮ ಆಚರಣೆ ಮಾಡುತ್ತಾರೋ ಅದನ್ನೆ ಮಾಡಬೇಕು. ಹಾಗೆಯೆ ದಸರಾ ಉದ್ಘಾಟನೆ ಸಹ ಪರಂಪರೆಯಂತೆ ನಡೆದುಕೊಂಡು ಬರಬೇಕು ಎಂದರು.