ಸಾಗರ ನಗರದಲ್ಲಿ ನಾಳೆ ಬೆಳಗ್ಗೆ ಮುಸ್ಲಿಂ ಸಮುದಾಯದ ವತಿಯಿಂದ ಮೆರವಣಿಗೆ ನಡೆಯಲಿದ್ದು ಯಾವುದೇ ಧರ್ಮಕ್ಕೆ ಧಕ್ಕೆ ಬಾರದಂತೆ ಶಾಂತಿಯುತವಾಗಿ ಹಬ್ಬ ಆಚರಣೆ ಮಾಡುಬೇಕು ಎಂದು ಈದ್ ಮಿಲಾದ್ ಕಮಿಟಿಯ ಅಧ್ಯಕ್ಷ ಜಮೀಲ್ ರಾಜವಿ ತಿಳಿಸಿದ್ದಾರೆ. ಸಾಗರದಲ್ಲಿ ಬುಧವಾರ ಸಂಜೆ 6 ಗಂಟೆಗೆ ಮಾತನಾಡಿದ ಅವರು ನಾಳೆ ಬೆಳಗ್ಗೆ 11:30ರ ಸುಮಾರಿಗೆ ನಗರದ ಅಜಾದ್ ಮಸ್ಟಿದ್ ಮುಂಭಾಗದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಅಶೋಕ ರಸ್ತೆ ಮಾರ್ಗವಾಗಿ ಮಾರ್ಕೆಟ್ ರಸ್ತೆ ಮೂಲಕ ಜನ್ನತ್ ನಗರದಲ್ಲಿ ಮೆರವಣಿಗೆ ಮುಕ್ತಾಯಗೊಳ್ಳಲಿದೆ. ಮೆರವಣಿಗೆಯಲ್ಲಿ ಯುವಕರು ಯಾವುದೇ ಧರ್ಮಕ್ಕೆ ಧಕ್ಕೆ ಬಾರದಂತೆ ಶಾಂತಿಯುತವಾಗಿ ನಡೆಸಿಕೊಂಡು ಬೇಕು ಎಂದು ಮನವಿ ಮಾಡಿದರು.