Download Now Banner

This browser does not support the video element.

ಬಳ್ಳಾರಿ: ಕುರುಗೋಡು ತಾಲ್ಲೂಕಿಗೆ ಸಮರ್ಪಕ ಬಸ್ ಬಿಡಲು ಆಗ್ರಹಿಸಿ ನಗರದಲ್ಲಿ ಸಾರ್ವಜನಿಕರು ಬಸ್ ತಡೆಗಟ್ಟಿ ಎಐಕೆಕೆಎಂಎಸ್ ನೇತೃತ್ವದಲ್ಲಿ ಪ್ರತಿಭಟನೆ

Ballari, Ballari | Sep 10, 2025
ನಗರದ ಬಸ್ ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಬಸ್ ಬಾರದ ಕಾರಣ ಆಕ್ರೋಶಗೊಂಡ ಸಾರ್ವಜನಿಕರು ಬಸ್ ತಡೆಗಟ್ಟಿ ಎಐಕೆಕೆಎಂಎಸ್ ರೈತ ಸಂಘದ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಗುರಳ್ಳಿ ರಾಜ ಮಾತನಾಡುತ್ತಾ ಕುರುಗೋಡು ತಾಲ್ಲೂಕು ಬಳ್ಳಾರಿಯಿಂದ ಬರೀ 28 ಕೀ. ಮೀ ದೂರದಲ್ಲಿರುವ ಪ್ರಮುಖವಾದ ತಾಲ್ಲೂಕಾಗಿದೆ. ಬಳ್ಳಾರಿಗೆ ಬರುವ ಜನತೆ ಸಂಜೆ ಕುರುಗೋಡಿಗೆ ತೆರಳಲು ಪ್ರತಿನಿತ್ಯ ಪರದಾಡುವಂತಾಗಿದೆ. ಶಾಲಾ-ಕಾಲೇಜು ಮಕ್ಕಳು ಮಧ್ಯಾಹ್ನ ಊಟವಿಲ್ಲದೆ ಉಪವಾಸ ಇರುವಂತಾಗಿದೆ. ಕುರುಗೋಡಿನಿಂದ ಸುತ್ತಲಿನ ಹಳ್ಳಿಗಳಿಗೆ ತೆರಳಲು ಸಂಜೆಯಾದಂತೆ ಬಸ್ ಅಥವಾ ಇನ್ನಿತರ ವಾಹನಗಳ ವ್ಯವಸ್ಥೆ ಇಲ್ಲವಾಗಿದೆ.
Read More News
T & CPrivacy PolicyContact Us