ಶಿರಸಿ :ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆದ ರಾಷ್ಟ್ರೀಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ,ಜಿಲ್ಲೆಯ ಕ್ರೀಡಾಪಟು ವಿಶಿಷ್ಟ ಸಾಧನೆ ಮಾಡಿದ್ದಾರೆ. ಜಿಲ್ಲೆಯ ಶಿರಸಿ ತಾಲೂಕಿನ ಯುವ ಪ್ರತಿಭೆ ರಕ್ಷಿತ್ ರವೀಂದ್ರ ಅವರು 400 ಮೀಟರ್ ಹರ್ಡಲ್ಸ್ (ತಡೆ ಓಟ) ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆಲ್ಲುವ ಮೂಲಕ ರಾಜ್ಯ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಕಠಿಣ ಸ್ಪರ್ಧೆ ನೀಡುವ ಈ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ, ರಕ್ಷಿತ್ ರವೀಂದ್ರ ಅವರು ತಮ್ಮ ಓಟದ ಶೈಲಿ ಮತ್ತು ಸಮಯದ ನಿರ್ವಹಣೆಯೊಂದಿಗೆ ಗಮನ ಸೆಳೆದಿದ್ದಾರೆ.