ಅತಿಯಾದ ಮಳೆಯಿಂದ ಬೆಳೆ ಹಾನಿಗೊಳಗಾದ ಸೇಡಂ ತಾಲೂಕಿನ ಮುಧೋಳ, ಆಡಕಿ, ಬಿದರ್ ಚೇಡ್, ಹುಡಾ, ನೀಲಹಳ್ಳಿ, ಕೊಂಕನಳ್ಳಿ ಗ್ರಾಮಗಳ ಹೊಲಗಳಿಗೆ ತೆರಳಿ ಸಚಿವ ಶರಣಪ್ರಕಾಶ ಪಾಟೀಲ್ ಪರಿಶೀಲನೆ ನಡೆಸಿದರು. ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಸುತ್ತಾಡಿ, ತೊಗರಿ, ಹೆಸರು ಹಾಗೂ ಉದ್ದು ಬೆಳೆಗಳ ಸ್ಥಿತಿಯನ್ನು ಕಂಡು ಬೆಳೆ ಹಾನಿ ಪರಿಹಾರ ಒದಗಿಸುವ ಕುರಿತು ರೈತರಿಗೆ ಭರವಸೆ ನೀಡಿದರು.ತಕ್ಷಣ ಸ್ಥಳದಲ್ಲಿಯೇ ಇದ್ದ ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಕ್ತ ಪರಿಹಾರ ನೀಡುವಂತೆ ಸೂಚನೆ ನೀಡಿದರು. ಸೋಮವಾರ 4 ಗಂಟೆಯವರೆಗೆ ಪರಿಶೀಲನೆ ಮಾಡಲಾಯಿತು...