ಅಗಸ್ಟ್ 24ರ ಸಂಜೆ ಐದು ಗಂಟೆಗೆ ಸಿಎಂಗೆ ಸರ್ವ ಸಂಘಟನೆ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ವಿಶೇಷ ಮನವಿ ಮಾಡಿದ್ದಾರೆ. 2025ರ ದಸರಾ ಉದ್ಘಾಟನೆಗೆ ಮುಖ್ಯಮಂತ್ರಿಗಳು ಭೂಕರ್ ಪ್ರಶಸ್ತಿ ವಿಜೇತೆ ಆಗಿರುವಂತಹ ಬಾನು ಮುಷ್ತಾಕ್ ಹೆಸರು ಹೇಳಿದ್ರು. ಬಾನು ಮುಷ್ತಾಕ್ ಅವರಿಗೆ ಗೌರವ ಸಮರ್ಪಣೆಯಾಗಿ ಈ ಸಲ ದಸರಾ ಉದ್ಘಾಟನೆ ಅವರೇ ಮಾಡಬೇಕು ಅಂತ ತಿಳಿಸಿದ್ರು. ಅದೇ ವಿಚಾರ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ. ಮುಸ್ಲಿಂ ಮಹಿಳೆಯ ಕೈಯಲ್ಲಿ ದಸರಾ ಉದ್ಘಾಟನೆ ಮಾಡಬಾರದು ಅಂತ ಆಕ್ರೋಶ ಹೊರಹಾಕಲಾಗುತ್ತಿದೆ. ಪ್ರತಿಭಟನೆಯ ವಾರ್ನಿಂಗ್ ಅನ್ನು ಕೊಡಲಾಗಿದೆ. ನಗರದಲ್ಲಿ ಈ ವಿಚಾರ ಚರ್ಚೆ ಆಗುತ್ತಿದ್ದು ಸಿಎಂ ಮುಂದಿನ ನಡೆ ಏನು ಅನ್ನೋದೇ ಕುತೂಹಲ.