ಹುಬ್ಬಳ್ಳಿ: RCB ಕಪ್ ಗೆದ್ದಾಯ್ತು. ಆದ್ರೆ ಇದರ ಸಂಭ್ರಮ ಮಾತ್ರ ಕಡಿಮೆ ಆಗಿಲ್ಲ. ಹೀಗಾಗಿನೇ ಈ ಸಲ ಗಣೇಶ ಹಬ್ಬಕ್ಕೆ ಆರ್‌ಸಿಬಿ ಕಪ್ ಥೀಮ್ ನಡಿ ಗಣೇಶನಮೂರ್ತಿ ಪ್ರತಿಷ್ಠಾಪನೆ ಮಾಡಿ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ ಹೌದು, ಗಣೇಶ ಹಬ್ಬ ಬಂತ್ತು ಅಂದರೆ ಯುವಕರಲ್ಲಿ ಎಲ್ಲಿಲ್ಲದ ಸಂಭ್ರಮ. ಅದರಲ್ಲೂ ವಿಭಿನ್ನ ಗಣೇಶ ಕೂರಿಸಿ ಎಲ್ಲರ ಗಮನ ಸೆಳೆಯಬೇಕು ಎನ್ನುವುದು ಕಾಮನ್. ಹಾಗಾಗಿ ಹುಬ್ಬಳ್ಳಿ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದಲ್ಲಿ ಶ್ರೀಸಾಯಿ ಯುವಕರ ಸ್ವಸಹಾಯ ಸಂಘ ಕೊಟಗೊಂಡಹುಣಸಿ ವತಿಯಿಂದ ಆರ್‌ಸಿಬಿ ಗೆದ್ದ ಕಪ್ ಹಿಡಿದ ಮೂರ್ತಿ ಕೂಡಿಸಿ ಗಣೇಶನ ಭಕ್ತಿಯ ಜೊತೆಗೆ ಆರ್ ಸಿಬಿ ತಂಡದ ಅಭಿಮಾನ ಮೆರೆದಿದೆ.