ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಟ ಸುದೀಪ್ ಬೆಂಗಳೂರಿನ ನಂದಿ ಲಿಂಕ್ ಗ್ರೌಂಡ್ಸ್‌ನಲ್ಲಿ ಸಂಜೆ ೫ ಗಂಟೆ ಸುಮಾರಿಗೆ ಸುದ್ದಿಗೋಷ್ಠಿ ನಡೆಸಿ ಸಾಕಷ್ಟು ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ಡಿಕೆ ಶಿವಕುಮಾರ್ ಅವರ ನಟ್ಟು ಬೋಲ್ಟು ಹೇಳಿಕೆಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸುದೀಪ್, ನಟ್ಟು ಬೋಲ್ಟು ಕಿತಾಪತಿ ಸಾಧು ಕೋಕಿಲ ಅವರದ್ದು. ಇದ್ರಲ್ಲಿ ಡಿಕೆ ಸಾಹೇಬರದ್ದು ಏನೂ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಸಾಧು ಕೋಕಿಲ ಅವರಿಗೆ ಆಮೇಲೆ ಹೇಳ್ತಾರೆ, ಎಲ್ಲರನ್ನೂ ಒಟ್ಟಿಗೆ ಕರೆದ್ರೆ ನಾನು ಹೇಗೆ ಮೆಂಟೇನ್ ಮಾಡ್ಲಿ? ಯಾರಿಗೆ ಸೆಕ್ಯೂರಿಟಿ ಕೊಡ್ಲಿ ಅಂತಾರೆ. ಅದನ್ನ ಮೊದಲೇ ಅವರಿಗೆ ಹೇಳ್ಬೇಕು ತಾನೆ. ಇದು ಸಾಧು ಅವರ ಕಿತಾಪತಿ ಎಂದರು ಕಿಚ್ಚ.