ಕಡೂರು: ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಡಿ.ಐ.ಜಿ ರವಿ ಚನ್ನಣ್ಣನವರ್ ಬುಧವಾರ ಒಂದು ಗಂಟೆ ಸುಮಾರಿಗೆ ಕಡೂರು ಅಗ್ನಿಶಾಮಕ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದಿಡೀರ್ ಭೇಟಿಯಿಂದ ಕೆಳಕಾಲ ಗಾಬರಿಗೊಂಡ ಅಧಿಕಾರಿಗಳು, ಗಲಿಬಿಲಿ ಗೊಳ್ಳುವಂತೆ. ಈ ಸಂದರ್ಭದಲ್ಲಿ ಅಗ್ನಿಶಾಮಕ ವಾಹನಗಳ ಸ್ಥಿತಿಗತಿಗಳನ್ನು ಹಾಗೂ ಸಿಬ್ಬಂದಿಗಳ ಕುಂದು ಕೊರತೆಯನ್ನು ಆಲಿಸಿ ಠಾಣೆಯ ಕಡತಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ರಾಜು.ಎಚ್ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರವೀಣ ಕೆ.ಎನ್ ಸಹಾಯಕ ಅಗ್ನಿಶಾಮಕ ಠಾಣಾ ಅಧಿಕಾರಿ ದೇವೇಂದ್ರಪ್ಪ ಸೇರಿದಂತೆ ಠಾಣೆಯ ಸಿಬ್ಬಂದಿಗಳು ಹಾಜರಿದ್ದರು...