ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಕೋವೆರಹಟ್ಟಿ ಗ್ರಾಮದ ದಲಿತ ವಿದ್ಯಾರ್ಥಿನಿ ವರ್ಷಿತಾ ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ರಾಜ್ಯ ಉಪಾಧ್ಯಕ್ಷ ಬಸವರಾಜ ಎಸ್ ನೇತೃತ್ವದ ನಿಯೋಗವು ಕುಟುಂಬಕ್ಕೆ ಸಾಂತ್ವನವನ್ನು ಭಾನುವಾರ ಸಂಜೆ 6 ಗಂಟೆಯಲ್ಲಿ ಸಲ್ಲಿಸಿತು. ವರ್ಷಿತಾ ಚಿತ್ರದುರ್ಗ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿಯಾಗಿದ್ದು, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯದಲ್ಲಿ ವಾಸವಿದ್ದಳು. ಆಗಸ್ಟ್ 14ರಂದು ಮನೆಗೆ ಹೋಗುತ್ತೇನೆಂದು ಹೊರಟಿದ್ದ ವರ್ಷಿತಾ, ಕೆಲವು ದಿನಗಳ ನಂತರ ಅರೆಬೆಂದ ಶವವಾಗಿ ಪತ್ತೆಯಾಗಿದ್ದಾಳೆ. ಕುಟುಂಬವು ಗಾಢ ದುಃಖದಲ್ಲಿ ಮುಳುಗಿದ್ದು, ತಾಯಿ ಜ್ಯೋತಿ ವ