ಮಡಿಕೇರಿ: ನಾಡಿನೆಲ್ಲೆಡೆ ಬುಧವಾರ ಸಂಭ್ರಮದ ಗೌರಿ ಗಣೇಶೋತ್ಸವ ವನ್ನು ಆಚರಿಸಲಾಯಿತು. ಬೆಳಗ್ಗಿನಿಂದಲೂ ಜಿಟಿ ಜಿಟಿ ಸುರಿಯುತ್ತಿದ್ದ ಮಳೆಯ ನಡುವೆಯೂ ಮಡಿಕೇರಿಯ ವಿವಿಧ ದೇವಾಲಯ ಹಾಗೂ ಬಡಾವಣೆಗಳಲ್ಲಿ ಭಕ್ತರು ವಿಘ್ನ ವಿನಾಯಕನನ್ನು ಭಕ್ತಿಯಿಂದ ಬರಮಾಡಿಕೊಂಡರು ನಗರದ ವಿಜಯ ವಿನಾಯಕ ದೇವಾಲಯ, ಕಂಚಿ ಕಾಮಾಕ್ಷಿ ದೇವಾಲಯ, ಪುಟಾಣಿ ನಗರ, ಮುನೀಶ್ವರ ಯುವಕ ಸಂಘ, ಶಾಂತಿನಿಕೇತನ ಯುವಕ ಸಂಘ, ಕಾನ್ವೆಂಟ್ ಜಂಕ್ಷನ್ ಮತ್ತು ಗೌಳಿ ಬೀದಿಯ ಹಿಂದೂ ಶಕ್ತಿ ಯುವಕ ಸಂಘ ಸೇರಿದಂತೆ ಮಡಿಕೇರಿ ನಗರದ ವಿವಿಧೆಡೆಗಳಲ್ಲಿ ವಿಘ್ನೇಶ್ವರನಿಗೆ ವಿಶೇಷ ಪೂಜೆ, ಸೇವೆಗಳು ನಡೆದವು ಹಾಗೂ ನೆರೆದಿದ್ದ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು.